Thursday, June 24, 2010

ಕಾಫೀ ಬೀಜ ಗೇರುವಾಗ

ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ...

ಮೊದಲ ಚಿತ್ರದಲ್ಲಿ ಅಜ್ಜಿ ಮುಖ ಸ್ಪುಟವಾಗಿದ್ರೂ ಕೈ, ಗೆರ್ಸಿ ಅಸ್ಪಷ್ಟವಾಗಿ ಚಲನೆಯನ್ನು ಸೂಚಿಸ್ತಾ ಇದೆ. ಇದಕ್ಕೆ ಬಳಸಿದ Exposure 1/40 ಸೆಕೆಂಡುಗಳು. ಇಲ್ಲಿ ನನ್ನ lens VR-Vibration Reduction (IS-Image Stabilization) ಆದ್ದರಿಂದ ಇತರ ಸಾಮಾನ್ಯ lensಗಿಂತ ದುಪ್ಪಟ್ಟು ಸ್ಥಿರತೆ ಕೊಡುತ್ತದೆ. ಸಾಮಾನ್ಯ lens ಆಗಿದ್ದರೆ exposure 1/60 ಸೆಕೆಂಡಿಗಿಂತ ಕಡಿಮೆಯಾದಂತೆ ನಮ್ಮ ಕೈಯ ಚಲನೆಯಿಂದ ಚಿತ್ರ ಅಸ್ಪಷ್ಟವಾಗಿ ಕಾಣಿಸುವುದು ಸಹಜ. ಅಜ್ಜಿ ಮುಖದ ಭಾವ ಇಷ್ಟ ಆದ್ರಿಂದ ಈ ಚಿತ್ರ ಇರಿಸಿಕೊಂಡು, ಇದೇ Exposure ಉಪಯೋಗಿಸಿಕೊಂಡು ಮತ್ತೊಂದು ಚಿತ್ರ ತೆಗೆಯೋಕೆ ಪ್ರಯತ್ನಿಸಿದೆ.


ಇದು ನಾ ತೆಗೆದ ಎರಡನೇ ಚಿತ್ರ. ಇಲ್ಲಿ ಕಾಫಿ ಬೀಜದ ಚಲನೆ ಮಾತ್ರ ಗುರುತಿಸಬಹುದು. ಗೆರ್ಸಿ, ಅಜ್ಜಿ ಚಿತ್ರದಲ್ಲಿ ಸ್ಪುಟವಾಗಿ ಚಿತ್ರಿತವಾಗಿದೆ. ಎರಡೂ ಚಿತ್ರದಲ್ಲಿ ಬಳಸಿದ exposure ಒಂದೇ ಆದರೂ ಕಾಲಾವಧಿ (timing) ಹೇಗೆ ಚಿತ್ರದ ಪರಿಣಾಮ ಬದಲಾಯಿಸುತ್ತದೆ ಅಲ್ಲವೇ? ಇದಕ್ಕೇ ಹಿರಿಯರು ಎಲ್ಲದಕ್ಕೂ ಸಮಯ ಕೂಡಿ ಬರ್ಬೇಕು ಅನ್ನೋದು :)


ಚಲನೆಯ ಫೋಟೋ ಇದೇ ರೀತಿ ತೆಗೀಬೇಕಾ, ಯಾವ್ಯಾವ ಚಲನೆಗೆ ಯಾವ exposure ಸರಿಹೊಂದುತ್ತೆ ಅಂತ ಹೇಳೋದು ಕಷ್ಟ. Exposure ೧/೧೦೦ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಇಟ್ಟುಕೊಂಡಿದ್ದರೆ ಕಾಫಿ ಬೀಜವೂ ಸ್ಪುಟವಾಗಿ ಹಾರಾಡ್ತಾ ಇರೋ ಫೋಟೋ ತೆಗೆಯಬಹುದಿತ್ತು. ಬೆಳಕು ಕಮ್ಮಿ ಇದ್ದಿದ್ರಿಂದ ISO ಜಾಸ್ತಿ ಮಾಡಿದ್ದರೆ (ಈ ಚಿತ್ರಕ್ಕೆ ಬಳಸಿದ ISO ೪೦೦ - aperture ನನ್ನ lens ಒದಗಿಸುವ ದೊಡ್ಡ ತೆರವಿಗೆ ಹೊಂದಿಸಿದ್ದೆ) ಆ ಪರಿಣಾಮದ ಚಿತ್ರ ಕೂಡ ಸಿಕ್ತಾ ಇತ್ತೇನೋ. ಆದ್ರೆ ನನ್ನ ತಲೆ ಆ ಅವಧಿಯಲ್ಲಿ ಇದರ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೂ ಚಲನೆ ಬಿಂಬಿಸುವ ಎರಡನೇ ಚಿತ್ರ ನನಗೆ ಇಷ್ಟ ಆಯ್ತು, ನಿಮಗೆ ಹೇಗೆ ಅನ್ನಿಸ್ತು ಅಂತಾನು ತಿಳಿಸಿ.

5 comments:

  1. ಹೌದು ನೀವು ಹೇಳಿದ ಹಾಗೆ ಮೊದಲನೇ ಚಿತ್ರದಲ್ಲಿ ಅಜ್ಜಿಯ ಮುಖಭಾವ ಚೆನ್ನಾಗಿದೆ, ಆದರೆ ನನಗೂ ಎರಡನೇ ಚಿತ್ರ ಇಷ್ಟವಾಯ್ತು ಅದರಲ್ಲಿ ಕಾಫಿ ಬೀಜದ ಚಲನೆ ಬಿಟ್ಟರೆ ಉಳಿದೆಲ್ಲವು ಸ್ಥಿರವಾಗಿದೆ. ನೀವು ಹೇಳಿದಹಾಗೆ ಮೊದಲನೇ ಚಿತ್ರಕ್ಕೆ ಶಟರ್ ಸ್ಪೀಡ್ ಜಾಸ್ತಿ ಇಟ್ಟಿದ್ರೆ ಕಾಫಿ ಬೀಜಗಳು ಸಕ್ಕತ್ ಆಗಿ ಕಂಡಿರೋದು.

    ನಮ್ಮೂರಲ್ಲಿ ಕೇರುವುದು ಅನ್ನುತ್ತೇವೆ, ಈ ಸಾಧನಕ್ಕೆ ಮೊರ ಎನ್ನುತ್ತೇವೆ.

    ReplyDelete
  2. ಕಾಫಿ ಬೀಜಗಳನ್ನು ಕೇರುವಾಗ, ಇರುವ ಸ್ಥಿರ ಭಾವದ ನಡುವೆ ಬೀಜಗಳಿಗೆ ಇರುವ ಚಲನೆಯಿಂದಲೇ ಎರಡನೇ ಚಿತ್ರ ಪರಿಣಾಮಕಾರಿಯಾಗಿ ಮೂಡಿದೆ ಅಂತ ಅನ್ನಿಸ್ತಾ ಇದೆ.

    ReplyDelete
  3. ಸಕತ್.. ಪಾಲಚ೦ದ್ರರೇ..

    ReplyDelete
  4. ಚಂದದ ಚಿತ್ರಗಳು..............
    ಎರಡನೇ ಚಿತ್ರ ಚನ್ನಾಗಿದೆ ಅನ್ಸುತ್ತೆ.
    ನಮ್ಮ ಕಡೆ ಕೆರುವುದು ಎಂತಲೂ, ಸಾಧನವನ್ನು ಮೊರ ಎಂತಲೂ ಹೇಳುತ್ತೇವೆ.

    ReplyDelete
  5. ಪಾಲಚ೦ದ್ರ ಅವರೆ,
    ಕಾಫೀ ಬೀಜವನ್ನು 'ಕೇರುತ್ತಿರುವ' ಚಿತ್ರಗಳು ಚೆನ್ನಾಗಿವೆ. ನಮ್ಮ ಕಡೆ ಇದನ್ನು ಕೇರುವುದು ಅನ್ನುತ್ತೇವೆ. ಮೊರ ಎಂಬುದರಲ್ಲಿ ಅಕ್ಕಿ, ಬೇಳೆ ಇತ್ಯಾದಿಯನ್ನು ಹೀಗೆ ಕೇರುವುದು ದಶಕಗಳ ಹಿಂದೆ ಸಾಮಾನ್ಯವಾಗಿತ್ತು (ಪಟ್ಟಣಗಳಲ್ಲಿ). ಇಂದಿಗೂ ಹಳ್ಳಿಗಳಲ್ಲಿ ಇವೆಲ್ಲ ಇವೆ. ಪಟ್ಟಣಪ್ರದೇಶಗಳಲ್ಲಿ ಕೆಲವು ಕಡೆ ಮೊರ ಎಂಬುದನ್ನು ಕೇಳಿರುವುದೂ ಇಲ್ಲ, ನೋಡಿರುವುದೂ ಇಲ್ಲ ಎನ್ನಬಹುದು ಕ್ಲೀನ್ಡ್ ಐಟೆಮ್ಗಳು ಬಂದಮೇಲೆ. ಹಹಹಹಅಹಹ.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)